Mercedes

 

 

 

 

 

 

 

 

ಕುವೈತ್ ಕನ್ನಡ ಕೂಟ ಕರುನಾಡ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ ಒಂದು ಕನ್ನಡಿಗರ ಸಂಘ. ಕನ್ನಡ ಕೂಟವು ಕನ್ನಡ ಭಾಷೆ, ಕಲೆ, ಸಂಸ್ಕೃತಿ, ನೃತ್ಯ, ಸಂಗೀತ, ನಾಟಕ ಎಲ್ಲದರ ಮೂಲಕ ನಾಡು-ನುಡಿಯ ಸೇವೆಯನ್ನು ಕುವೈತಿನಲ್ಲಿ ಮಾಡುತ್ತಾ ಬಂದಿದೆ.

ಕುವೈತಿನಲ್ಲಿ ಕನ್ನಡಿಗರ ಏಕೈಕ ಸಂಘವಾಗಿ ಅಸ್ತಿತ್ವಕ್ಕೆ ಬಂದ ಕುವೈತ್ ಕನ್ನಡ ಕೂಟ ಸುಮಾರು ೨೫ ವರ್ಷಗಳಿಂದಲೂ ನಮ್ಮ ನಾಡಿನ ಸಾಂಸ್ಕೃತಿಕ ಕಲೆಯನ್ನು ತನ್ನ ನಿಯತಕಾಲಿಕ ಚಟುವಟಿಕೆಗಳು, ಕಾರ್ಯಕ್ರಮಗಳು, ಅಂತರ್ಜಾಲ ಮತ್ತು ಮರಳ ಮಲ್ಲಿಗೆ ಪತ್ರಿಕೆಯ ಮೂಲಕ ಪ್ರಪಂಚದಾದ್ಯಂತ ಪಸರಿಸುವಂತೆ ಮಾಡುವ ಧ್ಯೇಯದಿಂದ ಮುಂದೆಸಾಗಿದೆ. ಕುವೈತಿನಲ್ಲಿರುವ ಕನ್ನಡಿಗರನ್ನೆಲ್ಲಾ ಒಂದೇ ವೇದಿಕೆಯ ವ್ಯಾಪ್ತಿಗೆ ತಂದು ಸದಸ್ಯರ ಮೂಲಕ ಸಂಸ್ಕೃತಿ, ಭಾಷೆಯ ಪ್ರಬುದ್ಧತೆಯನ್ನು ಕುವೈತಿನಾದ್ಯಂತ ಹರಡಿ ತಾಯ್ನಾಡಿಗೆ ಸಾಂಸ್ಕೃತಿಕ ಕೊಡುಗೆ ನೀಡುವ ಸತತ ಪ್ರಯತ್ನದಲ್ಲಿದ್ದೇವೆ. ನಾಡಿಗೆ ಕೀರ್ತಿ, ಕೂಟಕ್ಕೆ ಯಶಸ್ಸು ಮತ್ತು ನಮ್ಮೆಲ್ಲರ ಪ್ರಯತ್ನಕ್ಕೆ ಸಫಲತೆಗೆ ಸದಸ್ಯರ ಸಹಾಯ ಸಹಕಾರಗಳು ಕನ್ನಡ ಜ್ಯೋತಿಗೆ ಎಣ್ಣೆಯಾಗಲಿ ಎಂದು ಆಶಿಸುತ್ತೇವೆ.

ವಂದನೆಗಳು
 

Kuwait Kannada Koota is a cultural organization representing the Kannada speaking people from Karnataka State, India, who are working in the State of Kuwait.                                          read more...

 

 

 

 

 

 

Click here for more photographs of Indoor Picnic

 

 

 
@ Kuwait Kannada Koota. 2009. All rights reserved