ಪ್ರೊ.ಎಂ.ಕೃಷ್ಣೇಗೌಡ

Home > ಪ್ರೊ.ಎಂ.ಕೃಷ್ಣೇಗೌಡ

ಪ್ರೊ.ಎಂ.ಕೃಷ್ಣೇಗೌಡ

ಕುವೈತ್ ಕನ್ನಡ ಕೂಟದ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಅವರೇ, ಹಾಗೂ ಪ್ರೀತಿಯ ಕುವೈತ್ ಕನ್ನಡಿಗರೇ, ನಿಮಗೆಲ್ಲಾ ಹೃತ್ಪೂರ್ವಕ ನಮಸ್ಕಾರ. ನೀವು ನನ್ನನ್ನು ಪ್ರೀತಿಯಿಂದ ಆಹ್ವಾನಿಸಿ ತೋರಿಸಿದ ಗೌರವಾದರಗಳಿಗೆ ಸದ್ಭಾವನೆ ಸೌಜನ್ಯಗಳಿಗೆ ನಾನು ಋಣಿ. ನಿಮ್ಮಿಂದ ಬೀಳ್ಕೊಂಡು ಭಾರತಕ್ಕೆ ಹಿಂದಿರುಗುವಾಗ ಹಲವಾರು ಸವಿನೆನಪುಗಳನ್ನು ಹೊತ್ತು ಬಂದೆ. ಅದನ್ನೆಲ್ಲಾ ಹೊರಿಸಿ ಕಳುಹಿಸಿದವರು ನೀವೇ.ಈ ಸ್ನೇಹ ನಿರಂತರವಾಗಿರಲಿ, ಚಿರಂತನವಾಗಲಿ. ನಮ್ಮ ಮನಸ್ಸುಗಳ ತೇವ ಯಾವಾಗಲೂ ಆರದಿರಲಿ. ಕುವೈತ್ ಕನ್ನಡಿಗರ ಸಂತಸ ಸಾವಿರಮಡಿ ಹೆಚ್ಚಾಗಲಿ.ನಿಮ್ಮ ಮನೆಗಳಲ್ಲಿ ಹಾಲು ಉಕ್ಕಲಿ. ನೀವು ಬಯಸುವ ಸುಖ ನೆಮ್ಮದಿಗಳು ನಿಮಗೆ ಸುಲಭವಾಗಿ ಸಿಕ್ಕಲಿ. ನಮಸ್ಕಾರ. ವಿಶ್ವಾಸದಿಂದ ಪ್ರೊ.ಎಂ.ಕೃಷ್ಣೇಗೌಡ. ಮೈಸೂರು.

Youtube
Photos